ಶನಿವಾರ, ಮೇ 25, 2013

ಸುಪ್ತವಾಗಿರು ಓ ಇನಿಯೇ..

ಸುಪ್ತವಾಗಿರು ಓ ಇನಿಯೇ..

ಎಲ್ಲೋ ಒಂದು ದಿನ ಮನಸ್ಸಿಗೆ ಬಂದಿದ್ದು... ಅನುಭವವಿಲ್ಲದೇ ಬರೆದಿದ್ದೇನೆ..ಓದಿ,, ಇಷ್ಟವಾದರೆ ಪ್ರೋತ್ಸಾಹಿಸಿ..

ನಿನ್ನ ಮೋಹದ ಛಾಯೆಯೇ ಬೇಡ ,
ಹೋಗು ನೀ ಮಾಯೇ..
ಸಹಜ ಬಾಳಿಗೆ ಸನಿಹ ಬಾರದೇ,
ಸುಪ್ತವಾಗಿರು ಓ ಇನಿಯೇ..

 

ಮನಸಿನ ಮಾತನು ಕೇಳದ ಕಿವಿಗೆ,
ಕನಸಿನ ದನಿಯೇ ನಾಟಿತೆನಗೆ..
ಕಲ್ಪನೆಯೇ ನಿಜವೆಂದು ಭಾವಿಸಿದೆ
ಅಲ್ಪನಾಗಿಯೇ ಉಳಿದೆ ಕೊನೆಗೆ..

 

ಸೇರಿತ್ತು ಆ ನಿನ್ನ ಹೆಸರಿನ ಮಾಲೆ,
ನನ್ನದೆನ್ನುವ ಅಂಕಿತದಲಿ..
ಆತ್ಮಗೌರವಕೆಸೆದ ದ್ರೋಹವದು
ನಿನ್ನ ಹಾಳು ನೆನಪಿನಲಿ.


ಸಾಗರದಿ ಮುಳುಗಿ ಸಾವೆ ಬಂದರೂ,
ನಗುತಿದ್ದೆ ನಾ ನಿನ್ನ ನೆನೆದಂತೆ..
ಹೋಗಿರುವೆ ನೀ ದೂರ ಬಹುದೂರ ಈಗ
ಮೌನಿಯೊಳಗಿನ ಮಾತಂತೆ..

 

ಮತ್ತೆ ಬಂದರೆ ಸತ್ತುಬಿಡುವೆನು,
ಸುತ್ತದಿರು ನೆನಪಿನ ಬಂಧನ..
ಬತ್ತಲಾರದೆ ಇನ್ನು ಉಳಿದಿದೆ,
ಮಿಥ್ಯವಲ್ಲದ ರೋಧನ..


ಹುಚ್ಚು ಪ್ರೇಮದ ಸ್ವಚ್ಛ ನೆನಪಲಿ,
ಅಚ್ಚಳಿಯದೆ ಉಳಿದಿರುವೆ ನೀನು,
ನೀನಿಲ್ಲದ ನನ್ನತನವ ಉಳಿಸಲೆಂದೇ,
 ಬದುಕಿ ಬಾಳ್ವೆನು ನಾನು..

ನಿನ್ನ ಮೋಹದ ಛಾಯೆಯೇ ಬೇಡ ,
ಹೋಗು ನೀ ಮಾಯೇ..
ಸಹಜ ಬಾಳಿಗೆ ಸನಿಹ ಬಾರದೇ,
ಸುಪ್ತವಾಗಿರು ಓ ಇನಿಯೇ..


9 ಕಾಮೆಂಟ್‌ಗಳು:

  1. ತುಂಬಾ ಹತ್ತಿರವೆನಿಸಿತೀ ಭಾವ ....
    ಹತಾಶೆಯ ,ನೋವ ಭಾವವನ್ನು ತುಂಬಾ ಸಲೀಸಾಗಿ ವರ್ಗಾಯಿಸಿದ್ದೀರಿ ...
    ನಿಜ ಒಮ್ಮೆ ಕಾಡಿ ಹೋದ ಆ ಇನಿಯೆ ಸುಪ್ತ ಮನದಲ್ಲೆ ಕಳೆದುಹೋಗೋದು ವಾಸಿ ..
    ಮತ್ತೆ ಬಂದರೆ ಅದೇ ಒಲವಾದೀತು... ಅಥವಾ ....ಹೃದಯ ಒಡೆದೀತು !

    ಪ್ರತ್ಯುತ್ತರಅಳಿಸಿ
  2. ಮೊದಲನೆಯದಾಗಿ ಖುಷಿ ಆಯ್ತು ನಿನ್ನ ಬ್ಲಾಗ್ ನೋಡಿ , ಬ್ಲಾಗ್ ಲೋಕಕ್ಕೆ ಆತ್ಮೀಯ ಸ್ವಾಗತ :) ನಮ್ಮೂರಿನ ನನ್ನ ಆತ್ಮೀಯ ಗೆಳೆಯನ ಬ್ಲಾಗ್ ಇದೆ ಎಂದುಕೊಳ್ಳುವಲ್ಲಿ ಏನೋ ಖುಷಿ ಇದೆ ಅಲ್ವಾ?

    ಒಂದು ಸಲಹೆ: ಯಾರೇನೆ ಅಂದುಕೊಳ್ಳಲಿ, ಯಾರು ಪ್ರೋತ್ಸಾಹಿಸಲಿ ಬಿಡಲಿ , ಬರೆಯುತ್ತಿರು, ಆ ನಿರಂತರ ಬರೆಯುವಿಕೆ ಬೆಳೆಸುತ್ತದೆ ನಮ್ಮನ್ನು :)

    ಕವನ ಚೆನ್ನಾಗಿದೆ :) ಅಂತ್ಯ ಪ್ರಾಸದ ಜೊತೆಗೆ ಆದಿಪ್ರಾಸವೂ ಕೊಡಿ ಬಂದಿದೆ. ಭಾವಕ್ಕೆ ಭಂಗ ಬಂದಿಲ್ಲ.

    ಮತ್ತೊಮ್ಮೆ ಹೊಸ ಬ್ಲಾಗಿಗೆ ಅಭಿನಂದನೆಗಳು :) ಬರೀತಾ ಇರು :)

    ಪ್ರತ್ಯುತ್ತರಅಳಿಸಿ
  3. ವಾಹ್ ವಾಹ್...ಚಂದದ ಬ್ಲಾಗ್...ಅಂದದ ಕವನ...
    ಸ್ವಾಗತ...ಸುಸ್ವಾಗತ...ಶುಭಸ್ವಾಗತ....
    ಮುಂದುವರೆಯಲಿ ಕಾವ್ಯಜಾತ್ರೆ :)..
    ಚೆನಾಗಿದೆ..
    "ಸಾಗರದಿ ಮುಳುಗಿ ಸಾವೆ ಬಂದರೂ,
    ನಗುತಿದ್ದೆ ನಾ ನಿನ್ನ ನೆನೆದಂತೆ.."
    ಇಷ್ಟವಾದ ಸಾಲು...
    ಮತ್ತೆ ಕೊನೆಯ ಚರಣಕ್ಕೆ ಒಂದು ಗೆರೆ ಜಾಗ ಬಿಡಬೇಕಿತ್ತಾ???
    ಬಿಟ್ಟಿದ್ರೆ ನೋಡಕ್ಕೆ ಇನ್ನೂ ಚಂದ ಅನ್ಸತ್ತೆ ..ನೋಡಿ ಒಂದ್ಸಲ...
    .ಬರೆಯುತ್ತಿರಿ..
    ನಮಸ್ತೆ :)

    ಪ್ರತ್ಯುತ್ತರಅಳಿಸಿ
  4. ಯಾರಿರಲಿ , ಇಲ್ಲದಿರಲಿ.. ನಿರಂತರವಾಗಿ ಸಾಗುತಿರುವುದೇ ಜೀವನ..
    ಚಂದದ ಕವನ..
    ಬ್ಲಾಗ್ ಲೋಕಕ್ಕೆ ಸ್ವಾಗತ :-)
    ಸುಬ್ರಹ್ಮಣ್ಯ ಹೆಗ್ಡೇರು ಹೇಳಿದಂಗೆ.. ಬರೀತಿರಿ :-)

    ಪ್ರತ್ಯುತ್ತರಅಳಿಸಿ
  5. ನಿಮ್ಮ ಪ್ರೀತಿಯ ಪ್ರೋತ್ಸಾಹಕ್ಕೆ ಧನ್ಯವಾದಗಳು.. ಹೀಗೆ ಬರುತ್ತಿರಿ..

    ಪ್ರತ್ಯುತ್ತರಅಳಿಸಿ